MY GOD, MY LORD
KN translation not yet available. Showing English.
ವಿಶ್ವಾಸದ ವಿಧಾನ
ಸರ್ವೇಶ್ವರಾ, ನೀವು ಒಬ್ಬರೇ ದೇವರಾಗಿದ್ದು ನಿಮ್ಮಲ್ಲಿ ಪಿತ, ಸುತ ಮತ್ತು ಪವಿತ್ರಾತ್ಮರು ಎಂಬ ಮೂರು ದೈವೀವ್ಯಕ್ತಿಗಳು ಇದ್ದಾರೆಂದು ನಾನು ವಿಶ್ವಾಸಿಸುತ್ತೇನೆ. ನಿಮ್ಮ ಪುತ್ರ ಮನುಷ್ಯರಾಗಿ ಮತ್ತು ನಮ್ಮ ಪಾಪಗಳಿಗೋಸ್ಕರ ಮೃತರಾಗಿ, ಜೀವಂತರಿಗೂ ಮೃತರಿಗೂ ನ್ಯಾಯನಿರ್ಣಯ ಮಾಡಲು ಬರುವರೆಂದು ವಿಶ್ವಾಸಿಸುತ್ತೇನೆ. ಪವಿತ್ರ ಕಥೋಲಿಕ ಧರ್ಮಸಭೆಯು ಬೋಧಿಸುವಂತಹ ಎಲ್ಲಾ ಸತ್ಯಗಳನ್ನೂ ನೀವು ತಿಳಿಯಪಡಿಸಿದ್ದೀರಿ. ಅನಂತ ಜ್ಞಾನವೂ, ಸತ್ಯವೂ, ಆಗಿರುವ ನೀವು ಮೋಸ ಹೋಗುವವರಲ್ಲ ಹಾಗು ಮೋಸ ಮಾಡುವವರಲ್ಲಾ ಎಂಬುದನ್ನು ನಾನು ವಿಶ್ವಾಸಿಸುತ್ತೇನೆ. ಈ ವಿಶ್ವಾಸದಲ್ಲಿ ನಾನು ಜೀವಿಸಲು ಮತ್ತು ಸಾಯಲು ಸಂಕಲ್ಪಿಸುತ್ತೇನೆ. ಆಮೆನ್.
ಭರವಸೆಯ ವಿಧಾನ
ಸವೇಶ್ವರಾ, ನೀವು ಅನಂತ ಶಕ್ತಿಶಾಲಿ, ಪ್ರಾಮಾಣಿಕ, ದಯಾಪರ ಮತ್ತು ಕೃಪಾಳು. ನೀವು ವಾಗ್ದಾನಿಸಿದ ಮೇರೆಗೆ ನಿಮ್ಮ ಅನುಗ್ರಹದಿಂದ ನನ್ನ ಎಲ್ಲಾ ಪಾಪಗಳಿಗೆ ಕ್ಷಮೆಯನ್ನು ಮತ್ತು ಇಹಲೋಕದ ಜೀವನ ಮುಗಿದಾಗ ಅನಂತ ಆನಂದವನ್ನು ನಾನು ಪಡೆಯುವೆನೆಂದೇ ನನ್ನ ಭರವಸೆ. ಈ ಭರವಸೆಯಲ್ಲಿ ನಾನು ಜೀವಿಸಲು ಮತ್ತು ಸಾಯಲು ಸಂಕಲ್ಪಿಸುತ್ತೇನೆ, ಆಮೆನ್.
ಪ್ರೀತಿಯ ವಿಧಾನ
ಸರ್ವೇಶ್ವರಾ, ನಾನು ಎಲ್ಲಕ್ಕೂ ಮಿಗಿಲಾಗಿ ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ನಿಮಗೋಸ್ಕರ ನನ್ನಂತೆಯೇ ನನ್ನ ಪರರನ್ನೂ ಪ್ರೀತಿಸುತ್ತೇನೆ. ಕಾರಣ ನೀವು ಪರಮ, ಅನಂತ ಹಾಗು ಪರಿಪೂರ್ಣ ಒಳ್ಳೆಯವರೂ, ನನ್ನ ಎಲ್ಲ ಪ್ರೀತಿಗೂ ಯೋಗ್ಯರೂ ಆಗಿದ್ದೀರಿ. ಆದುದರಿಂದ ಈ ಪ್ರೀತಿಯಲ್ಲಿ ನಾನು ಜೀವಿಸಲು ಮತ್ತು ಸಾಯಲು ಸಂಕಲ್ಪಿಸುತ್ತೇನೆ. ಆಮೆನ್.
ಪಶ್ಚಾತ್ತಾಪದ ವಿಧಾನ
ಸರ್ವೇಶ್ವರಾ, ಪ್ರೀತಿ ಪಾತ್ರರಾದ ತಂದೆಯೇ, ನನ್ನ ಪಾಪಗಳಿಂದ ವಿರೋಧವಾಗಿ ನಡೆದು, ನಿಮ್ಮನ್ನು ದುಃಖ ಪಡಿಸಿದ್ದೇನೆ; ನಿಮ್ಮ ಪುತ್ರರಾದ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ್ದೇನೆ; ನಿಮ್ಮ ದಂಡನೆಗೆ ಗುರಿಯಾಗಿದ್ದೇನೆ. ಆದುದರಿಂದ ನಾನು ಮಾಡಿದ ಎಲ್ಲಾ ಪಾಪಗಳಿಗಾಗಿ ಬಹಳ ವ್ಯಸನಪಡುತ್ತೇನೆ, ಬಹಳ ದುಃಖ ಪಡುತ್ತೇನೆ, ಬಹಳ ಪಶ್ಚಾತ್ತಾಪ ಪಡುತ್ತೇನೆ. ಇನ್ನೂ ಮೇಲೆ ನಿಮ್ಮ ಕೃಪಾವರದ ಸಹಾಯದಿಂದ ನಿಮ್ಮ ಚಿತ್ತದ ಪ್ರಕಾರ ನಡೆದು ಪಾಪ ಮಾಡುವುದೇ ಇಲ್ಲವೆಂದು ದೃಢ ಪ್ರತಿಜ್ಞೆ ಮಾಡುತ್ತೇನೆ, ಪ್ರಭು, ಆಮೆನ್.
ಸಂತೋಷದ ರಹಸ್ಯಗಳು (ಸೋಮವಾರ ಮತ್ತು ಶನಿವಾರ)
1. ಗಾಬ್ರಿಯೆಲ್ದೂತನು ಮರಿಯಮ್ಮನವರಿಗೆ ಮಂಗಳವಾರ್ತೆಯನ್ನು ಸಾರಿದನು.
2. ದೇವಮಾತೆಯು ಸಂತ ಎಲಿಜಬೇತಮ್ಮಳನ್ನು ಸಂಧಿಸಿದರು.
3. ಬಾಲ ಯೇಸು ದನದ ಕೊಟ್ಟಿಗೆಯಲ್ಲಿ ಜನಿಸಿದರು.
4. ಮರಿಯಮ್ಮನವರು ಯೇಸು ಬಾಲರನ್ನು ದೇವಾಲಯದಲ್ಲಿ ಕಾಣಿಕೆಯಾಗಿ ಅರ್ಪಿಸಿದರು.
5. ಮೂರು ದಿನ ಕಾಣದೆ ಹೋದ ಯೇಸು ಬಾಲರು ಮಾತಾ ಪಿತೃರಿಗೆ ದೇವಾಲಯದಲ್ಲಿ ಸಿಕ್ಕಿದರು.
ದುಃಖದ ರಹಸ್ಯಗಳು (ಮಂಗಳವಾರ ಮತ್ತು ಶುಕ್ರವಾರ)
1. ಪ್ರಭು ಯೇಸು ಗೆತ್ಸೆಮನಿ ತೋಪಿನಲ್ಲಿ ರಕ್ತದ ಬೆವರನ್ನು ಸುರಿಸಿದರು.
2. ಪ್ರಭು ಯೇಸುವನ್ನು ಕಲ್ಲಿನ ಕಂಬಕ್ಕೆ ಕಟ್ಟಿ ಚಾಟಿಗಳಿಂದ ಹೊಡೆದರು.
3. ಪ್ರಭು ಯೇಸುವಿನ ಶಿರಸ್ಸಿಗೆ ಮುಳ್ಳಿನ ಕಿರೀಟವನ್ನು ತೊಡಿಸಿದರು.
4. ಪ್ರಭು ಯೇಸು ಶಿಲುಬೆಯನ್ನು ಹೊತ್ತುಕೊಂಡು ಕಪಾಲ ಬೆಟ್ಟವನ್ನು ಹತ್ತಿದರು.
5. ಪ್ರಭು ಯೇಸು ಶಿಲುಬೆಯ ಮೇಲೆ ನಮಗಾಗಿ ಪ್ರಾಣ ತ್ಯಾಗ ಮಾಡಿದರು.
ಮಹಿಮೆಯ ರಹಸ್ಯಗಳು (ಬುಧವಾರ ಮತ್ತು ಭಾನುವಾರ)
1. ಮೃತರಾದ ಯೇಸು ಮೂರನೆಯ ದಿನ ಪುನರುತ್ಥಾನರಾದರು.
2. ಪುನರುತ್ಥಾನದ ನಂತರ ನಲ್ವತ್ತನೇದಿನ ಯೇಸು ಸ್ವರ್ಗಕ್ಕೆ ಆರೋಹಣವಾದರು.
3. ಪವಿತ್ರಾತ್ಮರು ಪ್ರೇಷಿತರ ಮೇಲೆ ಇಳಿದು ಬಂದರು.
4. ದೇವಮಾತೆಯು ಸ್ವರ್ಗಸ್ವೀಕೃತರಾದರು.
5. ದೇವ ಮಾತೆ ಸ್ವರ್ಗದ ಹಾಗೂ ಸಕಲ ಸಂತರ ರಾಣಿಯಾಗಿ ಕಿರೀಟ ಧಾರಣಿಯಾದರು.
ಬೆಳಕಿನ ರಹಸ್ಯಗಳು (ಗುರುವಾರ)
1. ಜೋರ್ದಾನ್ನದಿಯಲ್ಲಿ ಯೇಸು ಸ್ವಾಮಿ ಸ್ನಾನ ದೀಕ್ಷೆ ಪಡೆದರು
2. ಕಾನಾ ಊರಿನ ಮದುವೆಯಲ್ಲಿ ಪ್ರಭು ಯೇಸು ತಮ್ಮ ಮಹಿಮೆಯನ್ನು ಪ್ರಕಟಪಡಿಸಿದರು
3. ದೇವರ ಸಾಮ್ರಾಜ್ಯದ ಬಗ್ಗೆ ಘೋಷಿಸಿ ಮನ ಪರಿವರ್ತನೆಯಾಗಲು ಯೇಸು ಕರೆ ನೀಡಿದರು
4. ಪ್ರಭು ಯೇಸು ತಾಬೋರ್ಬೆಟ್ಟದ ಮೇಲೆ ರೂಪಾಂತರ ಗೊಂಡರು
5. ಕೊನೆಯ ಭೋಜನದ ಸಮಯದಲ್ಲಿ ಪ್ರಭು ಯೇಸು ಪರಮ ಪ್ರಸಾದ ಸಂಸ್ಕಾರವನ್ನು ಸ್ಥಾಪಿಸಿದರು
ನಮೋ ರಾಣಿಯೇ
ನಮೋ ರಾಣಿಯೇ, ದಯೆಯ ತಾಯಿಯೇ, ನಮ್ಮ ಜೀವವೇ, ಮಾಧರ್ಯವೇ ಮತ್ತು ನಂಬಿಕೆಯೇ, ಏವೆಯ ಬಹಿಷ್ಕೃತ ಮಕ್ಕಳಾದ ನಾವು ನಿಮಗೆ ಮೊರೆಯಿಡುತ್ತೇವೆ. ಈ ಕಣ್ಣೀರ ಕಣಿವೆಯಲ್ಲಿ ಬಹಳ ಸಂಕಟದಿoದ ಅತ್ತು ಪ್ರಲಾಪಿಸುತ್ತೇವೆ. ಆದುದರಿಂದ ನಮ್ಮ ಆಶ್ರಯವೇ, ನಿಮ್ಮ ಕೃಪಾ ಕಟಾಕ್ಷ ನಮ್ಮಮೇಲೆ ಇರಿಸಿ. ಈ ದೇಶಾಂತರ ವಾಸವು ತೀರಿದ ಬಳಿಕ ನಿಮ್ಮ ಉದರದ ಧನ್ಯ ಫಲವಾದ ಯೇಸುವಿನ ದರ್ಶನವನ್ನು ನಮಗೆ ನೀಡಿರಿ. ದಯಾ ಪರಿಯೇ, ಪ್ರೀತಿ ಮಯಿಯೇ, ಮಧುರಕ ನ್ಯಾಮರಿಯೇ!

ಶ್ಲೋಕ: ಕ್ರಿಸ್ತರ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ
ಪ್ರತಿ ಶ್ಲೋಕ :ಪರಿಶುದ್ಧ ದೇವ ಮಾತೆಯೇ, ನಮಗಾಗಿ ಪ್ರಾರ್ಥಿಸಿರಿ.
ದೇವಮಾತೆಯ ಮನ ವಿಮಾಲೆ
ಪ್ರಭೂ, ದಯೆ ತೋರಿ
ಕ್ರಿಸ್ತರೇ, ದಯೆ ತೋರಿ
ಪ್ರಭೂ, ದಯೆ ತೋರಿ
ಕ್ರಿಸ್ತರೇ ನಮ್ಮನ್ನು ಆಲಿಸಿರಿ...
ಕ್ರಿಸ್ತರೇ ನಮ್ಮ ಪ್ರಾರ್ಥನೆಯನ್ನು ಚೆನ್ನಾಗಿ ಆಲಿಸಿರಿ

(ಉತ್ತರ: ನಮಗೆ ದಯೆ ತೋರಿ)
ಪರಲೋಕದ ಪಿತದೇವರೇ,
ಲೋಕ ರಕ್ಷಕರಾದ ಸುತ ದೇವರೇ,
ಪವಿತ್ರಾತ್ಮ ದೇವರೇ
ಪರಮತ್ರಿತ್ವರಾದ ಏಕ ದೇವರೇ

(ಉತ್ತರ: ನಮಗಾಗಿ ಪ್ರಾರ್ಥಿಸಿರಿ)
ಸಂತ ಮರಿಯಮ್ಮನವರೇ
ದೇವರ ಪರಿಶುದ್ಧತಾಯೇ
ಕನ್ನಿಕೆಯರಲ್ಲಿ ಮಹಾಪರಿಶುದ್ಧ ಕನ್ನಿಕೆಯೇ
ಪ್ರಭು ಕ್ರಿಸ್ತರ ತಾಯೇ
ಧರ್ಮ ಸಭೆಯ ತಾಯೇ
ದಯೆಯ ತಾಯೇ
ದೇವ ವರಪ್ರಸಾದದ ತಾಯೇ
ಭರವಸೆಯ ತಾಯೇ
ಅತಿ ಪರಿಶುದ್ಧ ತಾಯೇ
ಅತಿ ವಿರಕ್ತಳಾದ ತಾಯೇ
ನಿರ್ಮಲವಾದ ತಾಯೇ
ಕನ್ಯತ್ವವನ್ನು ಕುಂದಿಸದ ತಾಯೇ
ಪ್ರೀತಿಗೆ ಪಾತ್ರಳಾದ ತಾಯೇ
ಆಶ್ಚರ್ಯಕರ ತಾಯೇ,
ಒಳ್ಳೆಯ ಆಲೋಚನೆಯ ತಾಯೇ
ಸೃಷ್ಟಿಕರ್ತರ ತಾಯೇ
ರಕ್ಷಕರ ತಾಯೇ
ಅತಿ ಬುದ್ಧಿವಂತೆಯಾದ ಕನ್ನಿಕೆಯೇ
ಪೂಜ್ಯಳಾದ ಕನ್ನಿಕೆಯೇ
ಸ್ತುತ್ಯಳಾದ ಕನ್ನಿಕೆಯೇ
ಶಕ್ತಿಯುಳ್ಳ ಕನ್ನಿಕೆಯೇ
ದಯಾ ಮಯ ಕನ್ನಿಕೆಯೇ
ಪ್ರಾಮಾಣಿಕ ಕನ್ನಿಕೆಯೇ
ನೀತಿಯ ಕನ್ನಡಿಯೇ
ಜ್ಞಾನದ ಪೀಠವೇ
ನಮ್ಮ ಸಂತೋಷದ ಬುಗ್ಗೆಯೇ
ಆಧ್ಯಾತ್ಮಿಕ ಪಾತ್ರೆಯೇ
ಮಹಿಮಾ ಭರಿತ ಪಾತ್ರೆಯೇ
ಅತ್ಯಂತ ಭಕ್ತಿಯುಳ್ಳ ಪಾತ್ರೆಯೇ
ಗಹನವಾದ ರೋಜಾಪುಷ್ಪವೇ
ಚಿನ್ನದ ಆಲಯವೇ
ದಾವೀದನ ಉಪ್ಪರಿಗೆಯೇ
ದಂತದ ಉಪ್ಪರಿಗೆಯೇ
ಒಡಂಬಡಿಕೆಯ ಪೆಟ್ಟಿಗೆಯೇ
ಮೋಕ್ಷದ ಬಾಗಿಲೇ
ಉದಯ ಕಾಲದ ನಕ್ಷತ್ರವೇ
ವ್ಯಾಧಿಸ್ಥರಿಗೆ ಆರೋಗ್ಯವೇ
ಪಾಪಿಗಳಿಗೆ ಶರಣೇ
ವಲಸೆಗಾರರ ಆಶ್ರಯವೇ
ಕಷ್ಟಪಡುವವರಿಗೆ ಉಪಶಮನವೇ
ಕ್ರೆಸ್ತರಿಗೆ ಸಹಾಯವೇ,
ದೇವದೂತರ ರಾಣಿಯೇ
ಪಿತಾ ಪಿತೃಗಳ ರಾಣಿಯೇ
ಪ್ರವಾದಿಗಳ ರಾಣಿಯೇ
ಪ್ರೇಷಿತರ ರಾಣಿಯೇ
ರಕ್ತಸಾಕ್ಷಿಗಳ ರಾಣಿಯೇ
ಧರ್ಮಸಾಕ್ಷಿಗಳ ರಾಣಿಯೇ
ಕನ್ನಿಕೆಯರ ರಾಣಿಯೇ
ಸಕಲ ಸಂತರ ರಾಣಿಯೇ
ಜನ್ಮ ಪಾಪವಿಲ್ಲದೆ ಉದ್ಭವಿಸಿದ ರಾಣಿಯೇ
ಸ್ವರ್ಗ ಸ್ವೀಕೃತ ರಾಣಿಯೇ
ಜಪಮಾಲೆಯ ರಾಣಿಯೇ
ಕುಟುಂಬಗಳ ರಾಣಿಯೇ
ಸಮಾಧಾನದ ರಾಣಿಯೇ

ಲೋಕದಪಾಪಗಳನ್ನುಪರಿಹರಿಸುವದೇವರಕುರಿಮರಿಯೇ,
ನಮ್ಮನ್ನುಕ್ಷಮಿಸಿರಿಪ್ರಭು.

ಲೋಕದಪಾಪಗಳನ್ನುಪರಿಹರಿಸುವದೇವರಕುರಿಮರಿಯೇ,
ನಮ್ಮನ್ನುಆಲಿಸಿರಿಪ್ರಭು.

ಲೋಕದಪಾಪಗಳನ್ನುಪರಿಹರಿಸುವದೇವರಕುರಿಮರಿಯೇ,
ನಮಗೆದಯೆತೋರಿಸ್ವಾಮಿ.

ಶ್ಲೋಕ : ಕ್ರಿಸ್ತರ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ
ಪ್ರತಿ ಶ್ಲೋಕ : ಪರಿಶುದ್ಧ ದೇವಮಾತೆಯೇ, ನಮಗಾಗಿ ಪ್ರಾರ್ಥಿಸಿರಿ.

ಪ್ರಾರ್ಥಿಸೋಣ:
ಪ್ರಭು ದೇವರೇ, ಸದಾ ಕನ್ನಿಕೆಯಾದ ಸಂತ ಮರಿಯಮ್ಮನವರ ಬಿನ್ನಹಗಳ ಮೂಲಕ, ನಿಮ್ಮ ದಾಸರಾದ ನಾವು ಮಾನಸಿಕ ಹಾಗೂ ಶಾರೀರಿಕ ಆರೋಗ್ಯದಿಂದಿರುವತೆಯೂ, ಇಹದ ಕಷ್ಟಗಳಿಂದ ಬಿಡುಗಡೆಯಾಗಿ ಪರದ ನಿತ್ಯಾನಂದವನ್ನು ಸವಿಯುವಂತೆಯೂ ಅನುಗ್ರಹಿಸಿರಿ. ನಮ್ಮ ಪ್ರಭು ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ, ಆಮೆನ್.