ಶಿಲುಬೆಯ ಗುರುತು
ಪವಿತ್ರ ಶಿಲುಬೆಯ + ಗುರುತಿನ ಮೂಲಕ, ನಮ್ಮ ವೈರಿಗಳಿಂದ + ನಮ್ಮನ್ನು ರಕ್ಷಿಸಿರಿ, ನಮ್ಮ + ಸರ್ವೇಶ್ವರ, ಪಿತನ ಮತ್ತು ಸುತನ ಮತ್ತು ಪವಿತ್ರಾತ್ಮನ ನಾಮದಲ್ಲಿ, ಆಮೆನ್.
ಸ್ವರ್ಗದಲ್ಲಿರುವ ನಮ್ಮ ತಂದೆಯೇ
ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿಮ್ಮ ನಾಮ ಪೂಜಿತವಾಗಲಿ, ನಿಮ್ಮ ರಾಜ್ಯ ಬರಲಿ, ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭುವಿಯಲ್ಲಿಯೂ ನೆರವೇರಲಿ. ನಮ್ಮ ಅನುದಿನದ ಆಹಾರವನ್ನುಇಂದು ನಮಗೆ ನೀಡಿರಿ. ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಮ್ಮ ಪಾಪಗಳನ್ನು ಕ್ಷಮಿಸಿರಿ; ನಮ್ಮನ್ನು ಶೋಧನೆಗೆ ಒಳಪಡಿಸದೆ, ಕೇಡಿನಿಂದ ನಮ್ಮನ್ನು ರಕ್ಷಿಸಿರಿ, ಆಮೆನ್.
ನಮೋ ಮರಿಯಾ ಪ್ರಾರ್ಥನೆ
ನಮೋ ಮರಿಯಾ, ವರಪ್ರಸಾದ ಪೂರ್ಣೆಯೇ, ಪ್ರಭು ನಿಮ್ಮೊಡನೆ ಇದ್ದಾರೆ, ಸ್ತ್ರೀಯರಲ್ಲಿ ನೀವು ಧನ್ಯರು ಮತ್ತು ನಿಮ್ಮ ಉದರದ ಫಲವಾದಯೇ ಸುಧನ್ಯರು.
ಸಂತಮರಿಯಾ, ದೇವ ಮಾತೆಯೇ, ಪಾಪಿಗಳಾಗಿರುವ ನಮಗಾಗಿಈಗಲೂ ನಮ್ಮ ಮರಣದ ಸಮಯದಲ್ಲಿಯೂ ಪ್ರಾರ್ಥಿಸಿರಿ. ಆಮೆನ್.
ಸಂತಮರಿಯಾ, ದೇವ ಮಾತೆಯೇ, ಪಾಪಿಗಳಾಗಿರುವ ನಮಗಾಗಿಈಗಲೂ ನಮ್ಮ ಮರಣದ ಸಮಯದಲ್ಲಿಯೂ ಪ್ರಾರ್ಥಿಸಿರಿ. ಆಮೆನ್.
ಪರಮ ತ್ರಿತ್ವಕ್ಕೆ ಸ್ತೋತ್ರ
ಪಿತನಿಗೂ ಸುತನಿಗೂ ಪವಿತ್ರಾತ್ಮನಿಗೂ ಮಹಿಮೆಯಾಗಲಿ. ಆದಿಯಲ್ಲಿಇದ್ದ ಹಾಗೆಯೇ ಈಗಲು ಯಾವಾಗಲೂ ಯುಗ ಯುಗಾಂತರಕ್ಕೂ. ಆಮೆನ್.
ವಿಶ್ವಾಸದ ವಿಧಾನ
ಸರ್ವೇಶ್ವರಾ, ನೀವು ಒಬ್ಬರೇ ದೇವರಾಗಿದ್ದು ನಿಮ್ಮಲ್ಲಿ ಪಿತ, ಸುತ ಮತ್ತು ಪವಿತ್ರಾತ್ಮರು ಎಂಬ ಮೂರು ದೈವೀವ್ಯಕ್ತಿಗಳು ಇದ್ದಾರೆಂದು ನಾನು ವಿಶ್ವಾಸಿಸುತ್ತೇನೆ. ನಿಮ್ಮ ಪುತ್ರ ಮನುಷ್ಯರಾಗಿ ಮತ್ತು ನಮ್ಮ ಪಾಪಗಳಿಗೋಸ್ಕರ ಮೃತರಾಗಿ, ಜೀವಂತರಿಗೂ ಮೃತರಿಗೂ ನ್ಯಾಯನಿರ್ಣಯ ಮಾಡಲು ಬರುವರೆಂದು ವಿಶ್ವಾಸಿಸುತ್ತೇನೆ. ಪವಿತ್ರ ಕಥೋಲಿಕ ಧರ್ಮಸಭೆಯು ಬೋಧಿಸುವಂತಹ ಎಲ್ಲಾ ಸತ್ಯಗಳನ್ನೂ ನೀವು ತಿಳಿಯಪಡಿಸಿದ್ದೀರಿ. ಅನಂತ ಜ್ಞಾನವೂ, ಸತ್ಯವೂ, ಆಗಿರುವ ನೀವು ಮೋಸ ಹೋಗುವವರಲ್ಲ ಹಾಗು ಮೋಸ ಮಾಡುವವರಲ್ಲಾ ಎಂಬುದನ್ನು ನಾನು ವಿಶ್ವಾಸಿಸುತ್ತೇನೆ. ಈ ವಿಶ್ವಾಸದಲ್ಲಿ ನಾನು ಜೀವಿಸಲು ಮತ್ತು ಸಾಯಲು ಸಂಕಲ್ಪಿಸುತ್ತೇನೆ. ಆಮೆನ್.
ಭರವಸೆಯ ವಿಧಾನ
ಸವೇಶ್ವರಾ, ನೀವು ಅನಂತ ಶಕ್ತಿಶಾಲಿ, ಪ್ರಾಮಾಣಿಕ, ದಯಾಪರ ಮತ್ತು ಕೃಪಾಳು. ನೀವು ವಾಗ್ದಾನಿಸಿದ ಮೇರೆಗೆ ನಿಮ್ಮ ಅನುಗ್ರಹದಿಂದ ನನ್ನ ಎಲ್ಲಾ ಪಾಪಗಳಿಗೆ ಕ್ಷಮೆಯನ್ನು ಮತ್ತು ಇಹಲೋಕದ ಜೀವನ ಮುಗಿದಾಗ ಅನಂತ ಆನಂದವನ್ನು ನಾನು ಪಡೆಯುವೆನೆಂದೇ ನನ್ನ ಭರವಸೆ. ಈ ಭರವಸೆಯಲ್ಲಿ ನಾನು ಜೀವಿಸಲು ಮತ್ತು ಸಾಯಲು ಸಂಕಲ್ಪಿಸುತ್ತೇನೆ, ಆಮೆನ್.
ಪ್ರೀತಿಯ ವಿಧಾನ
ಸರ್ವೇಶ್ವರಾ, ನಾನು ಎಲ್ಲಕ್ಕೂ ಮಿಗಿಲಾಗಿ ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ನಿಮಗೋಸ್ಕರ ನನ್ನಂತೆಯೇ ನನ್ನ ಪರರನ್ನೂ ಪ್ರೀತಿಸುತ್ತೇನೆ. ಕಾರಣ ನೀವು ಪರಮ, ಅನಂತ ಹಾಗು ಪರಿಪೂರ್ಣ ಒಳ್ಳೆಯವರೂ, ನನ್ನ ಎಲ್ಲ ಪ್ರೀತಿಗೂ ಯೋಗ್ಯರೂ ಆಗಿದ್ದೀರಿ. ಆದುದರಿಂದ ಈ ಪ್ರೀತಿಯಲ್ಲಿ ನಾನು ಜೀವಿಸಲು ಮತ್ತು ಸಾಯಲು ಸಂಕಲ್ಪಿಸುತ್ತೇನೆ. ಆಮೆನ್.
ಪಶ್ಚಾತ್ತಾಪದ ವಿಧಾನ
ಸರ್ವೇಶ್ವರಾ, ಪ್ರೀತಿ ಪಾತ್ರರಾದ ತಂದೆಯೇ, ನನ್ನ ಪಾಪಗಳಿಂದ ವಿರೋಧವಾಗಿ ನಡೆದು, ನಿಮ್ಮನ್ನು ದುಃಖ ಪಡಿಸಿದ್ದೇನೆ; ನಿಮ್ಮ ಪುತ್ರರಾದ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ್ದೇನೆ; ನಿಮ್ಮ ದಂಡನೆಗೆ ಗುರಿಯಾಗಿದ್ದೇನೆ. ಆದುದರಿಂದ ನಾನು ಮಾಡಿದ ಎಲ್ಲಾ ಪಾಪಗಳಿಗಾಗಿ ಬಹಳ ವ್ಯಸನಪಡುತ್ತೇನೆ, ಬಹಳ ದುಃಖ ಪಡುತ್ತೇನೆ, ಬಹಳ ಪಶ್ಚಾತ್ತಾಪ ಪಡುತ್ತೇನೆ. ಇನ್ನೂ ಮೇಲೆ ನಿಮ್ಮ ಕೃಪಾವರದ ಸಹಾಯದಿಂದ ನಿಮ್ಮ ಚಿತ್ತದ ಪ್ರಕಾರ ನಡೆದು ಪಾಪ ಮಾಡುವುದೇ ಇಲ್ಲವೆಂದು ದೃಢ ಪ್ರತಿಜ್ಞೆ ಮಾಡುತ್ತೇನೆ, ಪ್ರಭು, ಆಮೆನ್.
ಪ್ರೇಷಿತರ ವಿಶ್ವಾಸ ಸಂಗ್ರಹ
ಸ್ವರ್ಗವನ್ನು ಭುವಿಯನ್ನು ಸೃಷ್ಟಿಸಿದ ಸರ್ವಶಕ್ತ ದೇವಪಿತನನ್ನು ವಿಶ್ವಾಸಿಸುತ್ತೇನೆ. ಅವರ ಏಕೈಕ ಪುತ್ರರೂ ನಮ್ಮ ಪ್ರಭುವೂ ಆದ ಯೇಸು ಕ್ರಿಸ್ತರನ್ನು ವಿಶ್ವಾಸಿಸುತ್ತೇನೆ. ಇವರು ಪವಿತ್ರಾತ್ಮರಿಂದ ಗರ್ಭಧರಿಸಿದ ಕನ್ಯಾ ಮರಿಯಮ್ಮನವರಲ್ಲಿ ಜನಿಸಿದರು. ಪೋಂತ್ಸಿಯುಸ್ಪಿಲಾತನ ಅಧಿಕಾರದಲ್ಲಿ ಯಾತನೆಯನ್ನು ಅನುಭವಿಸಿ, ಶಿಲುಬೆಗೇರಿಸಲ್ಪಟ್ಟು, ಮೃತರಾಗಿ, ಸಮಾಧಿ ಮಾಡಲ್ಪಟ್ಟರು. ಪಾತಾಳಕ್ಕೆ ಇಳಿದು ಮೂರನೇ ದಿನ ಮೃತರ ಮಧ್ಯದಿಂದ ಪುನರ್ಜೀವಂತರಾಗಿ ಎದ್ದರು. ಸ್ವರ್ಗಕ್ಕೇರಿ ಸರ್ವಶಕ್ತ ದೇವ ಪಿತನ ಬಲಗಡೆಯಲ್ಲಿ ಆಸೀನರಾಗಿದ್ದಾರೆ. ಅಲ್ಲಿಂದ ಜೀವಂತರಿಗೂ ಮೃತರಿಗೂ ತೀರ್ಪು ಕೊಡಲು ಬರುವರು. ಪವಿತ್ರಾತ್ಮರನ್ನು ವಿಶ್ವಾಸಿಸುತ್ತೇನೆ. ಪವಿತ್ರ ಕಥೊಲಿಕ ಧರ್ಮಸಭೆಯನ್ನೂ ಸಂತರ ಅನ್ಯೋನ್ಯತೆಯನ್ನೂ ವಿಶ್ವಾಸಿಸುತ್ತೇನೆ. ಪಾಪ ಪರಿಹಾರವನ್ನು ವಿಶ್ವಾಸಿಸುತ್ತೇನೆ. ಮೃತರ ಪುನರುತ್ಥಾನವನ್ನು ವಿಶ್ವಾಸಿಸುತ್ತೇನೆ. ನಿತ್ಯ ಜೀವವನ್ನು ವಿಶ್ವಾಸಿಸುತ್ತೇನೆ. ಆಮೆನ್.
ತ್ರಿಕಾಲ ಪ್ರಾರ್ಥನೆ
ಪ್ರಭುವಿನ ದೂತನು ಮರಿಯಮ್ಮನವರಿಗೆ ಸಂದೇಶವಿತ್ತನು
ಇವರು ಪವಿತ್ರಾತ್ಮರಿಂದ ಗರ್ಭಧರಿಸಿದರು.
(ನಮೋ ಮರಿಯಾ)
ಇಗೋ ಪ್ರಭುವಿನ ಸೇವಕಿ
ನಿಮ್ಮ ವಚನದ ಪ್ರಕಾರ ನನಗಾಗಲಿ.
(ನಮೋ ಮರಿಯಾ)
ವಾರ್ತೆ ಎಂಬುವರು ಮನುಷ್ಯರಾದರು.
ಮತ್ತು ನಮ್ಮಲ್ಲಿ ವಾಸಮಾಡಿದರು
(ನಮೋ ಮರಿಯಾ)
ಶ್ಲೋಕ: ಕ್ರಿಸ್ತರ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ
ಪರಿಶುದ್ಧ ದೇವ ಮಾತೆಯೇ, ನಮಗಾಗಿ ಪ್ರಾರ್ಥಿಸಿರಿ.
ಪ್ರಾರ್ಥಿಸೋಣ:
ಪ್ರಭು, ದೇವದೂತನಸಂದೇಶದಿಂದನಿಮ್ಮಪುತ್ರರಾದಯೇಸುಕ್ರಿಸ್ತರುಮನುಷ್ಯಸ್ವಭಾವತಾಳಿದ್ದನ್ನುಅರಿತಿರುವನಾವುಅವರಯಾತನೆಯಹಾಗೂಶಿಲುಬೆಯಮೂಲಕಪುನರುತ್ಥಾನದಮಹಿಮೆಯನ್ನುಪಡೆಯುವಂತೆನಿಮ್ಮಕೃಪಾವರವನ್ನುನಮ್ಮಹೃದಯಗಳಲ್ಲಿಸುರಿಸಬೇಕೆಂದುನಮ್ಮಪ್ರಭುಕ್ರಿಸ್ತರಮುಖಾಂತರನಿಮ್ಮನ್ನುಪ್ರಾರ್ಥಿಸುತ್ತೇವೆ. ಆಮೆನ್.
ಪಿತನಿಗೂ... ಸುತನಿಗೂ... (ಮೂರುಸಲ)
ಇವರು ಪವಿತ್ರಾತ್ಮರಿಂದ ಗರ್ಭಧರಿಸಿದರು.
(ನಮೋ ಮರಿಯಾ)
ಇಗೋ ಪ್ರಭುವಿನ ಸೇವಕಿ
ನಿಮ್ಮ ವಚನದ ಪ್ರಕಾರ ನನಗಾಗಲಿ.
(ನಮೋ ಮರಿಯಾ)
ವಾರ್ತೆ ಎಂಬುವರು ಮನುಷ್ಯರಾದರು.
ಮತ್ತು ನಮ್ಮಲ್ಲಿ ವಾಸಮಾಡಿದರು
(ನಮೋ ಮರಿಯಾ)
ಶ್ಲೋಕ: ಕ್ರಿಸ್ತರ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ
ಪರಿಶುದ್ಧ ದೇವ ಮಾತೆಯೇ, ನಮಗಾಗಿ ಪ್ರಾರ್ಥಿಸಿರಿ.
ಪ್ರಾರ್ಥಿಸೋಣ:
ಪ್ರಭು, ದೇವದೂತನಸಂದೇಶದಿಂದನಿಮ್ಮಪುತ್ರರಾದಯೇಸುಕ್ರಿಸ್ತರುಮನುಷ್ಯಸ್ವಭಾವತಾಳಿದ್ದನ್ನುಅರಿತಿರುವನಾವುಅವರಯಾತನೆಯಹಾಗೂಶಿಲುಬೆಯಮೂಲಕಪುನರುತ್ಥಾನದಮಹಿಮೆಯನ್ನುಪಡೆಯುವಂತೆನಿಮ್ಮಕೃಪಾವರವನ್ನುನಮ್ಮಹೃದಯಗಳಲ್ಲಿಸುರಿಸಬೇಕೆಂದುನಮ್ಮಪ್ರಭುಕ್ರಿಸ್ತರಮುಖಾಂತರನಿಮ್ಮನ್ನುಪ್ರಾರ್ಥಿಸುತ್ತೇವೆ. ಆಮೆನ್.
ಪಿತನಿಗೂ... ಸುತನಿಗೂ... (ಮೂರುಸಲ)
ಪಾಸ್ಖಕಾಲದ ತ್ರಿಕಾಲ ಪ್ರಾರ್ಥನೆ
:ಸ್ವರ್ಗದರಾಣಿಯೇ ಆನಂದಿಸಿರಿ
ಅಲ್ಲೆಲೂಯ
:ಏಕೆಂದರೇ ಯಾರನ್ನು ನಿಮ್ಮ ಉದರದಲ್ಲಿ ಧರಿಸಲು ನೀವು ಪಾತ್ರರಾದಿರೋ
ಅಲ್ಲೆಲೂಯಾ
:ಅವರು ತಾವು ಹೇಳಿದ ಪ್ರಕಾರ ಪುನರುತ್ಥಾನಗೊಂಡಿದ್ದಾರೆ
ಅಲ್ಲೆಲೂಯ
:ನಮಗಾಗಿ ದೇವರನ್ನು ಪ್ರಾರ್ಥಿಸಿರಿ
ಅಲ್ಲೆಲೂಯ
:ಕನ್ಯಾ ಮರಿಯಮ್ಮನವರೇ ಸಂತೋಷಿಸಿ ಆನಂದಿಸಿರಿ,
ಅಲ್ಲೆಲೂಯ
:ಏಕೆಂದರೆ ಪ್ರಭು ನಿಜವಾಗಿ ಪುನರುತ್ಥಾನರಾಗಿದ್ದಾರೆ
ಅಲ್ಲೆಲೂಯ!
ಪ್ರಾರ್ಥಿಸೋಣ:
ಪ್ರಭು, ನಿಮ್ಮ ಪುತ್ರರು ನಮ್ಮ ಪ್ರಭುವೂ ಆದ ಯೇಸು ಕ್ರಿಸ್ತರ ಪುನರುತ್ಥಾನದಿಂದ ಭುವಿಯನ್ನು ಆನಂದ ಪಡಿಸಲು ನೀವು ಅನುಗ್ರಹಿಸಿದಿರಿ. ಅವರ ಕನ್ಯಾ ಮಾತೆ ಮರಿಯಮ್ಮನವರ ಮೂಲಕ ನಿತ್ಯ ಜೀವನದ ಆನಂದವನ್ನು ನಾವು ಪಡೆಯುವಂತೆ ಕರುಣಿಸಬೇಕೆಂದು ನಮ್ಮ ಪ್ರಭುಯೇಸುಕ್ರಿಸ್ತರ ಮುಖಾಂತರ ಪ್ರಾರ್ಥಿಸುತ್ತೇವೆ, ಆಮೆನ್.
ಅಲ್ಲೆಲೂಯ
:ಏಕೆಂದರೇ ಯಾರನ್ನು ನಿಮ್ಮ ಉದರದಲ್ಲಿ ಧರಿಸಲು ನೀವು ಪಾತ್ರರಾದಿರೋ
ಅಲ್ಲೆಲೂಯಾ
:ಅವರು ತಾವು ಹೇಳಿದ ಪ್ರಕಾರ ಪುನರುತ್ಥಾನಗೊಂಡಿದ್ದಾರೆ
ಅಲ್ಲೆಲೂಯ
:ನಮಗಾಗಿ ದೇವರನ್ನು ಪ್ರಾರ್ಥಿಸಿರಿ
ಅಲ್ಲೆಲೂಯ
:ಕನ್ಯಾ ಮರಿಯಮ್ಮನವರೇ ಸಂತೋಷಿಸಿ ಆನಂದಿಸಿರಿ,
ಅಲ್ಲೆಲೂಯ
:ಏಕೆಂದರೆ ಪ್ರಭು ನಿಜವಾಗಿ ಪುನರುತ್ಥಾನರಾಗಿದ್ದಾರೆ
ಅಲ್ಲೆಲೂಯ!
ಪ್ರಾರ್ಥಿಸೋಣ:
ಪ್ರಭು, ನಿಮ್ಮ ಪುತ್ರರು ನಮ್ಮ ಪ್ರಭುವೂ ಆದ ಯೇಸು ಕ್ರಿಸ್ತರ ಪುನರುತ್ಥಾನದಿಂದ ಭುವಿಯನ್ನು ಆನಂದ ಪಡಿಸಲು ನೀವು ಅನುಗ್ರಹಿಸಿದಿರಿ. ಅವರ ಕನ್ಯಾ ಮಾತೆ ಮರಿಯಮ್ಮನವರ ಮೂಲಕ ನಿತ್ಯ ಜೀವನದ ಆನಂದವನ್ನು ನಾವು ಪಡೆಯುವಂತೆ ಕರುಣಿಸಬೇಕೆಂದು ನಮ್ಮ ಪ್ರಭುಯೇಸುಕ್ರಿಸ್ತರ ಮುಖಾಂತರ ಪ್ರಾರ್ಥಿಸುತ್ತೇವೆ, ಆಮೆನ್.
ದೇವದೂತನ ಪ್ರಾರ್ಥನೆ
ದೇವದೂತನೇ, ನನ್ನ ಪ್ರೀತಿಯ ಕಾವ್ಯದೂತನೇ,ದೇವರ ಪ್ರೀತಿಯು ನನ್ನನ್ನು ನಿನ್ನ ವಶಕ್ಕೆ ಒಪ್ಪಿಸಿದೆ.ಈ ಇಡೀ ದಿನ (ಅಥವಾ ರಾತ್ರಿ) ನನ್ನ ಪಕ್ಕದಲ್ಲೇ ಇರು,ಬೆಳಕು ತೋರಲು, ಕಾಪಾಡಲು, ಆಳಲು ಮತ್ತು ಮಾರ್ಗದರ್ಶನ ಮಾಡಲು.ಆಮೆನ್.
ಶಾಶ್ವತ ವಿಶ್ರಾಂತಿಗಾಗಿ ಪ್ರಾರ್ಥನೆ
ಓ ಕರ್ತನೇ, ಅವರಿಗೆ ಶಾಶ್ವತ ವಿಶ್ರಾಂತಿ ನೀಡಿ. ಮತ್ತು ಶಾಶ್ವತ ಬೆಳಕು ಅವರ ಮೇಲೆ ಬೆಳಗಲಿ. ಅವರು ಶಾಂತಿಯಿಂದ ವಿಶ್ರಾಂತಿ ಪಡೆಯಲಿ. ಅವರ ಆತ್ಮಗಳು ಮತ್ತು ಅಗಲಿದ ಎಲ್ಲಾ ನಿಷ್ಠಾವಂತರ ಆತ್ಮಗಳು ದೇವರ ಕರುಣೆಯಿಂದ ಶಾಂತಿಯಿಂದ ವಿಶ್ರಾಂತಿ ಪಡೆಯಲಿ. ಆಮೆನ್.
MY GOD, MY LORD
KN translation not yet available. Showing English.
ಪಾಪನಿವೇದನೆಯ ಪ್ರಾರ್ಥನೆ
ಸರ್ವಶಕ್ತ ದೇವರಿಗೂ ಸಹೊದರ ಸಹೋದರಿಯರೇ ನಿಮಗೂ, ಯೋಚನೆಯಿಂದಲೂ ನುಡಿಯಿಂದಲೂ ನಡತೆಯಿಂದಲೂ ಕರ್ತವ್ಯ ಲೋಪದಿಂದಲೂ ನಾನು ಅನೇಕ ಪಾಪಗಳನ್ನು ಮಾಡಿದ್ದೇನೆಂದು ನಿವೇದಿಸುತ್ತೇನೆ. ನನ್ನ ಪಾಪವೇ, ನನ್ನ ಪಾಪವೇ, ನನ್ನ ಮಹಾ ಪಾಪವೇ, ಆದುದರಿಂದ ಸದಾ ಕನ್ನಿಕೆಯಾದ ಸಂತಮರಿಯಮ್ಮನವರನ್ನೂ ಸಕಲ ದೇವದೂತರನ್ನು ಸಂತರನ್ನೂ, ಸಹೋದರ ಸಹೋದರಿಯರೇ ನಿಮ್ಮನ್ನೂ ನನಗಾಗಿ ನಮ್ಮ ಪ್ರಭುದೇವರನ್ನು ಪ್ರಾರ್ಥಿಸಬೇಕೆಂದು ಬೇಡಿಕೊಳ್ಳುತ್ತೇನೆ.
ನಮೋ ರಾಣಿಯೇ
ನಮೋ ರಾಣಿಯೇ, ದಯೆಯ ತಾಯಿಯೇ, ನಮ್ಮ ಜೀವವೇ, ಮಾಧರ್ಯವೇ ಮತ್ತು ನಂಬಿಕೆಯೇ, ಏವೆಯ ಬಹಿಷ್ಕೃತ ಮಕ್ಕಳಾದ ನಾವು ನಿಮಗೆ ಮೊರೆಯಿಡುತ್ತೇವೆ. ಈ ಕಣ್ಣೀರ ಕಣಿವೆಯಲ್ಲಿ ಬಹಳ ಸಂಕಟದಿoದ ಅತ್ತು ಪ್ರಲಾಪಿಸುತ್ತೇವೆ. ಆದುದರಿಂದ ನಮ್ಮ ಆಶ್ರಯವೇ, ನಿಮ್ಮ ಕೃಪಾ ಕಟಾಕ್ಷ ನಮ್ಮಮೇಲೆ ಇರಿಸಿ. ಈ ದೇಶಾಂತರ ವಾಸವು ತೀರಿದ ಬಳಿಕ ನಿಮ್ಮ ಉದರದ ಧನ್ಯ ಫಲವಾದ ಯೇಸುವಿನ ದರ್ಶನವನ್ನು ನಮಗೆ ನೀಡಿರಿ. ದಯಾ ಪರಿಯೇ, ಪ್ರೀತಿ ಮಯಿಯೇ, ಮಧುರಕ ನ್ಯಾಮರಿಯೇ!
ಶ್ಲೋಕ: ಕ್ರಿಸ್ತರ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ
ಪ್ರತಿ ಶ್ಲೋಕ :ಪರಿಶುದ್ಧ ದೇವ ಮಾತೆಯೇ, ನಮಗಾಗಿ ಪ್ರಾರ್ಥಿಸಿರಿ.
ಶ್ಲೋಕ: ಕ್ರಿಸ್ತರ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ
ಪ್ರತಿ ಶ್ಲೋಕ :ಪರಿಶುದ್ಧ ದೇವ ಮಾತೆಯೇ, ನಮಗಾಗಿ ಪ್ರಾರ್ಥಿಸಿರಿ.
MORNING OFFERING PRAYER
KN translation not yet available. Showing English.
Mangala Jyothi
Diocesan Biblical Catechetical and Liturgical Centre